about us

Target Groups

• ಸುರಭಿ ವೃದ್ಧಾಶ್ರಮ ಸಮಾಜದಲ್ಲಿ ನೊಂದ ಮಕ್ಕಳಿಂದ ದೂರವಾದ ಮತ್ತು ಕುಂಟುಂಬದಲ್ಲಿ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಆಶ್ರಯ ನೀಡುವುದರ ಜೊತೆಗೆ ಧಾಖಲಾದ ಪ್ರತಿಯೊಬ್ಬ ವೃದ್ಧರನ್ನು ಪ್ರೀತಿಯಿಂದ ಸಹನೆಯಿಂದ ಭಾವಪೂರ್ಣವಾದ ಆರೈಕೆಯ ಮೂಲಕ ಅವರ ಕುಟುಂಬ ಸದಸ್ಯರ ಹಾಗೂ ಮಕ್ಕಳ ನೆನಪು ಬಾರದಂತೆ ಅವರ ಅವಶ್ಯಕತೆಗಳನ್ನು ಈಡೇರಿಸಬಹುದಾಗಿದೆ.

• ಹಿರಿಯ ನಾಗರಿಕರ ಹಾಗೂ ವೃದ್ಧರ ಆರೋಗ್ಯದ ಬಗ್ಗೆ ವೃದ್ಧಾಶ್ರಮಗಳು ಕಾರ್ಯತಂತ್ರ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ಪ್ರಸ್ತುತ ಭವಿಷ್ಯದ ಪೀಳಿಗೆಗೆ ಭದ್ರ ಪಡಿಸಿಕೊಳ್ಳಲು ಹಿರಿಯ ಜೀವಿಗಳಿಗೆ ಸುಸ್ಥಿರ ಗುರಿಗಳ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗುತ್ತದೆ. ಸಮಗ್ರ ಮತ್ತು ಗುಣಮಟ್ಟದ ಆರೈಕೆಯನ್ನು ಒದಗಿಸುವುದು ಮತ್ತು ಹಿರಿಯ ನಾಗರಿಕರ ಸುರಕ್ಷಿತ ಸಹಾನೂಭೂತಿ, ಜನ್ಮದತ್ತ ಪರಿಸರ ಸುತ್ತ ಮುತ್ತಲಿನ ಸಂಬಂಧಿಕ ಗೌರವ ಮತ್ತು ಘನತೆಯಿಂದ ಬದುಕುವಂತೆ ನೋಡಿಕೊಳ್ಳುವದು. ಹಿರಿಯ ನಾಗರಿಕರ ಜೀವನದ ಜ್ಞಾನ ಮತ್ತು ಅನುಭವಗಳನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸುವುದು. ಹಿರಿಯ ನಾಗರಿಕರು ಮತ್ತು ಸಮಾಜ ಎರಡಕ್ಕೂ ಅರ್ಥ ಪೂರ್ಣವಾಗಿ ಕೊಡುಗೆ ನೀಡಬಹುದಾಗಿದೆ. ಸಾಮಾಜಿಕ ಹಿರಿಯ ನಾಗರಿಕರ ಸಂಸ್ಥೆಯನ್ನು ಸ್ಥಾಪಿಸುವುದು ಹಿರಿಯ ನಾಗರಿಕರನ್ನು ಸಂವಹನ ಮಾಡುವುದು ಅವರಿಂದ ಆರೋಗ್ಯಕರ ಮತ್ತು ಶಾಂತಿಯುತ ಸಮಾಜದ ಅಗತ್ಯವಿರುವ ಮೌಲ್ಯಗಳನ್ನು ಕಲಿಯುವುದು. ಸಾಮಾಜಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಒಡನಾಟ, ಭಾವನಾತ್ಮಕ ಬೆಂಬಲ ಚಿಕಿತ್ಸೆ, ಮನರಂಜನಾ ಸೌಲಭ್ಯಗಳು ಹಾಗೂ ಚಟುವಟಿಕೆಗಳನ್ನು ಒದಗಿಸುವುದು. ದೈನಂದಿನ ಜೀವನದಲ್ಲಿ ಹಿರಿಯ ನಾಗರಿಕರಿಗೆ ಸ್ವಾತಂತ್ರ್ಯವನ್ನು ಒದಗಿಸುವುದು ಮತ್ತು ಜೀವನದ ಉನ್ನತ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು. ಹಿರಿಯರಿಗೆ ಸವಾಲಿನ ಮತ್ತು ನೆಮ್ಮದಿಯ ಅಗತ್ಯವಿರುವ ಆಶ್ರಯವನ್ನು ನಿಗದಿಪಡಿಸುವುದು ಸಕಾರಾತ್ಮಕವಾದ ಉದ್ದೇಶವಾಗಿರುತ್ತದೆ. ವಯಸ್ಸಾದ ಹಿರಿಯರು ತಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಮತ್ತು ಕುಟುಂಬದವರು ಸಹಭಾಗಿತ್ವದಲ್ಲಿ ತಮ್ಮ ಸಂತೋಷವನ್ನ ಪಡೆಯುತ್ತಾರೆ.

• ವೃದ್ಧಾಶ್ರಮಗಳಲ್ಲಿ ವೃದ್ಧರ ಆರೋಗ್ಯ ಭಾವನಾತ್ಮಕ ಸಂಬಂಧ ಸದೃಢತೆಯ ಯೋಜನೆ ಮತ್ತು ಗುರಿ ಹೊಂದಿಸುವ ಹಂತಗಳಲ್ಲಿರುವಾಗ ವಯಸ್ಸಾದ ಪ್ರೀತಿ ಪಾತ್ರರು ತಮ್ಮ ಆಸೆ ಬೇಡಿಕೆಗಳನ್ನು ಅನುಭವಿಸಲು ಅವರಿಗೆ ಬೇಕಾದ ಸಂಪನ್ಮೂಲಗಳನ್ನು ಗುರುತಿಸುವುದು ಮುಖ್ಯ. ಭಾರತದಲ್ಲಿ ವಯಸ್ಸಾದವರ ಜನಸಂಖ್ಯೆಯಲ್ಲಿ ಸ್ಥಿರ ಏರಿಕೆ ಇದೆ. ನಮ್ಮ ಸಾಂಪ್ರದಾಯಿಕ ಮೌಲ್ಯಗಳು ಹಿರಿಯರಿಗೆ ಗೌರವ ಮತ್ತು ಕಾಳಜಿಯನ್ನು ನೀಡುವಲ್ಲಿ ಒತ್ತು ನೀಡುತ್ತವೆ. ವಯಸ್ಸಾದ ವ್ಯಕ್ತಿ ಸಾಕಷ್ಟು ಸಾಮಾಜಿಕ ಭದ್ರತೆಯ ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ. ಮುಪ್ಪು ಒಂದು ಪ್ರಮುಖ ಸಾಮಾಜಿಕ ಸವಾಲಾಗಿ ಮಾರ್ಪಟ್ಟಿದೆ. ವೃದ್ಧರ ಆರ್ಥಿಕ ಮತ್ತು ಆರೋಗ್ಯಕರ ಅಗತ್ಯತೆಗಳನ್ನು ಪೂರೈಸುವ ಅವಶ್ಯಕತೆಯಿದೆ. ವಯಸ್ಸಾದವರ ಭಾವನಾತ್ಮಕ ಅಗತ್ಯತೆಗಳಿಗೆ ಅನುಕೂಲಕರವಾದ ಸಾಮಾಜಿಕ ಪರಿಸರವನ್ನು ವೃದ್ಧಾಶ್ರಮಗಳು ರಚಿಸುವ ಮೂಲಕ ಸ್ಪಷ್ಟವಾದ ಗುರಿ ಮತ್ತು ಉದ್ದೇಶವನ್ನು ತಿಳಿಸುತ್ತದೆ.

ಯಶಸ್ವಿ ಯಶೋಗಾಧೆಗಳು

1. ಶಾಂತಾಬಾಯಿ ಹೆರೂರು

ಇವರು ದಿನಾಂಕ 13/09/2019 ರಂದು ಕೊಪ್ಪಳ ಜಿಲ್ಲೆಯಲ್ಲಿರುವ ಸುರಭಿ ವೃದ್ದಾಶ್ರಮಕ್ಕೆ ಫಲಾನುಭವಿಯಾಗಿ ದಾಖಲು ಮಾಡಿಕೊಳ್ಳಲಾಗುತ್ತದೆ. ಶಾಂತಾಬಾಯಿ ಹೆರೂರು ವೃದ್ಧೆಯು ಮೂಲತ ಹುಬ್ಬಳ್ಳಿಯವರಾಗಿರುತ್ತಾರೆ. ಇವರು 65 ವರ್ಷ ವಯೋಮಿತಿಯವರಾಗಿದ್ದು ಹುಬ್ಬಳ್ಳಿಯಲ್ಲಿ 20/01/1955 ರಂದು ಜನನವಾಯಿತು ತಂದೆ ನಾಗರಾಜ್ ತಾಯಿ ಸೀತಾಬಾಯಿ ತುಂಬು ಅವಿಭಕ್ತ ಕುಟುಂಬದಲ್ಲಿ ಬೆಳೆದು ಬಂದರು. ಪ್ರೀತಿ ಅನ್ಯೋನ್ಯತೆಯಿಂದ ಬಾಲ್ಯವನ್ನು ಕಳೆದಿದ್ದಾರೆ.

ಮದ್ಯಮ ವರ್ಗದ ಕುಟುಂಬದಲ್ಲಿ ಬಂದ ಇವರ ತಂದೆ ನಾಗರಾಜ್ ರವರು ಸಣ್ಣ ಉದ್ದಿಮೆಯನ್ನು ಉಪಜೀವನಕ್ಕೆ ಪ್ರಾರಂಭಿಸಿದರು. ಮನೆಯ ಜೀವನಕ್ಕೆ ಉದ್ದಿಮೆಯೆ ಆಧಾರವಾಗಿತ್ತು. ತಾಯಿಯವರು ಮನೆ ಗೃಹಿಣಿಯಾಗಿದ್ದರು. ಕಾರಣಾಂತರಗಳಿಂದ ಶಾಂತಾಬಾಯಿಯವರು ಪ್ರಾಥಮಿಕ ಶಿಕ್ಷಣವನ್ನು ಪಡೆಯದೆ ಕಲಿಕೆ ಶಿಕ್ಷಣದಿಂದ ವಂಚಿತರಾದರು. ಶಾಲೆಯಿಂದ ದೂರವಾದರೂ ತಂದೆಯವರ ಜೊತೆ ದಿನಂಪ್ರತಿ ವ್ಯಾಪಾರದಲ್ಲಿ ಮಗ್ನರಾಗಿರುತ್ತಿದ್ದರು. ತಾಯಿ ಜೊತೆಗೆ ಸಂತೋಷದಿಂದ ತಮ್ಮ ಬಾಲ್ಯವನ್ನು ಮುಗಿಸಿದರು. ಶಾಂತಾಬಾಯಿಯವರು ಓರ್ವ ಅಕ್ಕನೊಂದಿಗೆ ತುಂಟಾಟ ಅನನ್ಯ ಪ್ರೀತಿ ಹೊಂದಾಣಿಕೆಯಿಂದ ಕಾಲಕಳೆದಿದ್ದರು.

ಇವರ 18ನೇ ವಯಸ್ಸಿನಲ್ಲಿ ಇವರ ತಂದೆ ಅನಾರೋಗ್ಯದಿಂದ ದೂರವಾದರು. ಕಾರಣ ಇಹಲೋಕ ಮುಗಿಸಿದರು. ಇದು ಇವರ ಕುಟುಂಬಕ್ಕೆ ತುಂಬಲಾರದ ನೋವು, ಕಷ್ಟಗಳನ್ನು ಎದುರಿಸಿದರು. ಎಲ್ಲ ಜವಾಬ್ದಾರಿ ತಾಯಿಯೇ ವಹಿಸಿದರು. ಶಾಂತಾಬಾಯಿ ಹೆರೂರು 25 ನೇಯ ವಯಸ್ಸಿನಲ್ಲಿ ನೀಲಪ್ಪ ಎಂಬುವರ ಜೊತೆಗೆ ದಾಂಪತ್ಯ ಪ್ರಾರಂಭಿಸಿದರು. ಸುಖಿ ದಾಂಪತ್ಯದೊಂದಿಗೆ ಜೀವನಕ್ಕಾಗಿ ಉದ್ಯಮ/ವ್ಯಾಪಾರವನ್ನು ಪ್ರಾರಂಭ ಮಾಡಿದರು.

ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಮೊದಲು ವ್ಯಾಪಾರವು ತುಂಬಾ ಚೆನ್ನಾಗಿ ಸಾಗಿತ್ತು. ಇವರ ದಾಂಪತ್ಯದಲ್ಲಿ ಇವರಿಗೆ 4 ಮಕ್ಕಳು ಜನಿಸಿದರು. 2ಹೆಣ್ಣು-2ಗಂಡು ಮಕ್ಕಳನ್ನು ಪಡೆದರು. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಹೊಂದಿ ಸ್ವಂತದಾದ ಚಿಕ್ಕದಾದ ಮನೆಯೊಂದನ್ನು ಮಾಡಿಕೊಂಡರು. ನಂತರದ ಜೀವನದಲ್ಲಿ ಪ್ರಗತಿ ಕಾಣುವಾಗ ಮನೆಯಿಂದ ದೂರವಾದರು. ಅನಾರೋಗ್ಯದಿಂದಿದ ವಯಸ್ಸಾಗಿ ಮರಣಹೊಂದಿದರು. ಇದರಿಂದ ಜೀವನದಲ್ಲಿ ತುಂಬಾ ಕಷ್ಟಗಳಿಂದ ಜೀವನೋಪಾಯ ಅವನತಿ ಸಾಗುತಾ ಬಂದಿತು. ವಿಧಿ ಎಷ್ಟು ಕೆಟ್ಟದೆಂದರೆ ಅನಾರೋಗ್ಯದಿಂದ ಗಂಡುಮಕ್ಕಳು ಮರಣಹೊಂದಿದರು. ಮಾನಸಿಕವಾಗಿ ನೊಂದರು. ಅನಾರೋಗ್ಯದಲ್ಲಿ ಅಸ್ತವ್ಯಸ್ತರಾದರು. ಮರಣದ ಜೀವನ ಮುಂದುವರೆಸಿದರು.

ಮುಂದೆ ತೊಂದರೆಗಳಿದ್ದರೂ ಸ್ವಾವಲಂಬಿಯಾಗಿ ಬೇರೆ ಬೇರೆ ಮನೆಗೆ ಹೋಗಿ ಸಾಧ್ಯವಾದಷ್ಟು ಮನೆಗೆಲಸ ಮಾಡಿ ಮಕ್ಕಳನ್ನು ಬೆಳೆಸಿದರು. ವಯಸ್ಸಿಗೆ ಬಂದ ಮಗಳನ್ನು ಆಡಂಬರದವಿಲ್ಲದೆ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ತಮ್ಮ ಮನೆತನದಲ್ಲಿ ವರನನ್ನು ಹುಡುಕಿ ಮಗಳಿಗೆ ಮದುವೆ ಮಾಡಿದರು.

ನಂತರದ ಏಕಾಂಗಿ ಕಷ್ಟದ ಜೀವನ ಸಾಗಿಸುವಾಗ ಎಷ್ಟು ಕಷ್ಟವೆಂರೆ ಅವರಿಗೆ ಪಾರ್ಶ್ವವಾಯು ಬಂದು ಅನಾರೋಗ್ಯಕ್ಕೆ ಒಳಗಾದರು. ಇದು ಅವರಿಗೆ ಮತ್ತಷ್ಟು ತೊಂದರೆ ಉಂಟು ಮಾಡಿತು. ಇದರಿಂದ ವೃದ್ಧಾಪ್ಯ ವೇತನ ಮಾಡಿಕೊಂಡರು. ಮುಂದೆ ಇವರ ಅಕ್ಕ ವೃದ್ಧಾಶ್ರಮಕ್ಕೆ ಸೇರಿಸಿದರು. ಇಲ್ಲಿ 5 ವರ್ಷಗಳ ಕಾಲ ನೆಮ್ಮದಿ ಸಂತೋಷದಿಂದ ಇರಲು ಇಲ್ಲಿಯೇ ಅವರು ಮಗಳ ಅಂತ್ಯಸಂಸ್ಕಾರಕ್ಕೆ ಹೋಗಿಬಂದರು. ಅವರ ಸಂಬಂಧಿಕರ ಮನವೊಲಿಸಿ ಮತ್ತೆ ಅವರ ಕುಟುಂಬ ಪುನರ್ಮಿಲನಗೊಳಿಸಿ ಅಜ್ಜಿಯನ್ನು ಅವರ ಕುಟುದೊಂದಿಗೆ ಸೇರಿಸಿ ಸುಖಾಂತ್ಯಗೊಳಿಸಿದರು.

2. ಯಲ್ಲಪ್ಪ ವಂಶಿ

ಯಲ್ಲಪ್ಪ ವಂಶಿ ಇವರು 12/06/2019 ರಂದು ಕೊಪ್ಪಳ ಜಿಲ್ಲೆಯಲ್ಲಿರುವ ಸುರಭಿ ವೃದ್ಧಾಶ್ರಮಕ್ಕೆ ಫಲಾನುಭವಿಯಾಗಿ ದಾಖಲು ಮಾಡಿಕೊಳ್ಳಲಾಗುತ್ತದೆ. ವೃದ್ಧರು ಕುರ್ತಕೋಟಿ ಇಂದ ಬಂದವರು. ಇವರು 66 ವರ್ಷ ವಯೋಮಿತಿ ಹೊಂದಿದ್ದಾರೆ. ಇವರು ಕುರ್ತಕೋಟಿ ಯಲ್ಲಿ ದಿನಾಂಕ 02/06/1954 ರಂದು ಜನನ ಹೊಂದಿದರು. ತಂದೆ ಕರಿಯಪ್ಪ ವಂಶಿ ತಾಯಿ ಲಕ್ಷ್ಮಿ ವಂಶಿ ಇವರ ತಂದೆ-ತಾಯಿಯರಿಗೆ ಒಟ್ಟು 5 ಜನ ಮಕ್ಕಳು. ಯಲ್ಲಪ್ಪ ವಂಶಿ ಇವರು 2ನೇ ಹಿರಿಯ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಇವರ ಕುಟುಂಬವು ಸಾಧಾರಣ ಮಧ್ಯಮ ವರ್ಗದಿಂದ ಕೂಡಿತ್ತು. ಚಿಕ್ಕ ಅಂಗಡಿಯ ಮೂಲಕ ಅಂದರೆ ಸಿಹಿ ಪದಾರ್ಥಗಳ ವ್ಯಾಪಾರ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ತಾಯಿ ಮನೆಗೆಲಸ ಮಾಡುತ್ತ 5 ಮಕ್ಕಳನ್ನು ಆರೈಕೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಬಾಲ್ಯದಲ್ಲಿ ಇವರಿಗೆ ಕುಟುಂಬದ ಅತಿಯಾದ ಬಡತನದಿಂದ ಯಾವುದೇ ಶಾಲೆಗೆ ಹೋಗದೆ ಶಿಕ್ಷಣದಿಂದ ವಂಚಿತರಾದರು. ಮನೆಯಲ್ಲಿ ಉಳಿದ ಸಹೋದರರೋಡನೆ ಆಟವಾಡುತ್ತಾ ಸಂತೋಷದಿಂದ ಕಾಲಕಳೆದಿದ್ದರು. ಮನೆಯಲ್ಲಿ ತಂದೆಯ ವ್ಯಾಪಾರದ ಜೊತೆಗೆ ಅವರೊಂದಿಗೆ ಸಹಾಯ ಮಾಡುತ್ತಾ ಬೆಳೆದು ದೊಡ್ಡವರಾದರು. ನಂತರ 16ನೇ ವಯಸ್ಸಿಗೆ ಮನೆಯಿಂದ ಹೊರಬಂದರು. ಹೊಟ್ಟೆಪಾಡಿಗಾಗಿ, ಬಡತನದಿಂದ ಸ್ವ ಇಚ್ಛೆಯಿಂದ ಮನೆಯನ್ನು ಬಿಟ್ಟರು. ಅಲ್ಲಿಂದ ಕರ್ನೂಲ ಸ್ಥಳಕ್ಕೆ ಬಂದರು ಎಂದು ತಿಳಿಸಿದ್ದಾರೆ. ಅಲ್ಲಿ ಸಂಬಂಧಿಕರ ಪರಿಚಯದ ಮೂಲಕ ಉಳಿದರು. ಉಡುಪಿಯ ಉಪಹಾರ ಮಂದಿರದಲ್ಲಿ ಸೇವಕರಾಗಿ ಕೆಲಸವನ್ನು ಆರಂಭಿಸಿದರು. 1960ರಲ್ಲಿ ಹೊಸಜೀವನ ಪ್ರಾರಂಭಮಾಡಿದರು.

ಹೋಟೆಲ್ ವಸತಿ ಗೃಹದಲ್ಲಿ ಉಳಿದುಕೊಂಡು ಜೀವನ ಸಾಗಿಸುತ್ತಿದ್ದರು. ಸುಮಾರು ಕೆಲವು ತಿಂಗಳುಗಳು ಮಾತ್ರ ಕಾರ್ಯ ನಿರ್ವಹಿಸಿದರು. ಆದರೆ ಬದುಕಿನ ಹೋರಾಟದಲ್ಲಿ ಒಂದೇ ಕಡೆ ಉಳಿಯದೆ ಬೇರೆ-ಬೇರೆ ನಗರ ಬೇರೆ-ಬೇರೆ ಕೆಲಸಗಳ ಮೂಲಕ ಜೀವನ ಬಂಡಿಯನ್ನು ಸಾಗಿಸಿದರು. 1961 ರಲ್ಲಿ ಇಲ್ಲಿಯೂ ಕೆಲಸಬಿಟ್ಟು ಬೆಂಗಳೂರು ನಗರಕ್ಕೆ ಬಂದರು. ಅಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ ಸಂಬಳ ಕಡಿಮೆ ಸಿಗುತ್ತಿದ್ದುದ್ದರಿಂದ ಕೆಲಸವನ್ನು ಬಿಟ್ಟು ನೇರವಾಗಿ ಹೈದ್ರಾಬಾದ ಪಟ್ಟಣಕ್ಕೆ ಹೋದರು. ಅಲ್ಲಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳ ಉತ್ತಮ ವಸತಿಯೊಂದಿಗೆ ನೆಮ್ಮದಿಯಿಂದ ಕಾಲಕಳೆದರು. ಇದರ ಮಧ್ಯದಲ್ಲಿ ಯಾವುದೇ ರೀತಿಯಲ್ಲಿ ಕುಟುಂಬದೊಂದಿಗೆ ಸಂಬಂಧವನ್ನು, ಸಂಪರ್ಕವನ್ನು ಹೊಂದದೆ ಜೀವನ ಸಾಗಿಸುತಿದ್ದರು. ತದನಂತರ ಅಲ್ಲಿಯೂ ಕೆಲಸಬಿಟ್ಟು 60ನೇ ವಯಸ್ಸಿನಲ್ಲಿ ಖಂದರಾಬಾದ ಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದರು.

ಇವರ ಜೀವನದಲ್ಲಿ ದೈಹಿಕ, ಮಾನಸಿಕವಾಗಿ ಚೆನ್ನಾಗಿದ್ದರೂ ಕಣ್ಣಿನ ಸಮಸ್ಯೆಯು ಪದೇಪದೇ ಕಂಡುಬರುತಿತ್ತು. ಆದರೂ ಅದನ್ನು ಸಣ್ಣಪುಟ್ಟ ಚಿಕಿತ್ಸೆ ಮೂಲಕ ಪರಿಹರಿಸಿಕೊಂಡು ಮುಂದೆ ಹೋಗುತ್ತಿದ್ದರು. ಮುಂದೆ 64ನೇ ವಯಸ್ಸಿನಲ್ಲಿ ಕಣ್ಣುಗಳ ದೃಷ್ಟಿಯು ಸಂಪೂರ್ಣವಾಗಿ ಕಾಣದೆ ಇರುವುದರಿಂದ ಜೀವನಕ್ಕೆ ದೊಡ್ಡ ತೊಂದರೆಯಾಯಿತು. ಎಲ್ಲ ಕೆಲಸದಲ್ಲಿಯೂ ಬೇರೆಯವರ ಸಹಾಯ ಪಡೆಯುವುದು ಅವಲಂಬನೆಯಾಗುವುದು ಅನಿವಾರ್ಯವಾಯಿತು. ಸ್ವಾವಲಂಬನೆಯಿಂದ ಬದುಕು ಸಾಗಿಸುತ್ತಿದ್ದ ಇವರಿಗೆ ಕಣ್ಣುಗಳ ದೃಷ್ಟಿದೋಷವು ದಿಕ್ಕು ತೋಚದಂತಾಗಿ ದೈನಂದಿನ ಕೆಲಸಗಳಿಗೂ ಸಹ ಗಂಭೀರವಾದ ತೊಂದರೆ ಪ್ರಾರಂಭವಾಯಿತು. ಮುಂದೆ ದಾರಿ ಕಾಣದೆ ನನ್ನಿಂದ ಒಂಟಿ ಜೀವನ ತುಂಬಾ ಕಷ್ಟವೆಂದು ಮನಗೊಂಡು ನೇರವಾಗಿ ಹುಬ್ಬಳ್ಳಿ ನಗರಕ್ಕೆ ಬಂದು ಪರಿಚಯದವರ ಮೂಲಕ ಕೊಪ್ಪಳ ಸುರಭಿ ವೃದ್ಧಾಶ್ರಮದ ಮೂಲಕ ಮಾಹಿತಿ ಪಡೆದುಕೊಂಡರು. ನೇರವಾಗಿ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮೇಲ್ವಿಚಾರಕರ ಮುಂದೆ ತಮ್ಮ ಜೀವನದ ಹಿನ್ನಲೆಯನ್ನು ವಿವರಿಸಿ ಇನ್ನು ನನಗೆ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಲು ಅನುಮತಿಯೊಂದಿಗೆ ಪ್ರವೇಶ ಪಡೆದುಕೊಂಡರು. ಪ್ರಸ್ತುತ ಉತ್ತಮವಾದ ದೈಹಿಕ, ಮಾನಸಿಕ ಆರೋಗ್ಯದೊಂದಿಗೆ ಇರುವ ವಯೋವೃದ್ಧರೊಂದಿಗೆ ಅನ್ಯೋನ್ಯ ಬಾಂಧವ್ಯದಿಂದ ನೆಮ್ಮದಿದಾಯಕ ಜೀವನ ಸಾಗಿಸುತ್ತಿದ್ದಾರೆ. ಸುರಭಿ ವೃದ್ಧಾಶ್ರಮ ನಮ್ಮ ಬಾಳಿಗೆ ಆಶಾಕಿರಣವಾಗಿ ಇದರ ಮುಖ್ಯಸ್ಥರಿಗೆ ಇನ್ನು ಹೆಚ್ಚು ವಯೋವೃದ್ಧರ ಪಾಲನೆ, ಪೋಷಣೆಯಲ್ಲಿ ಆ ಭಗವಂತ ಶಕ್ತಿಯನ್ನು ಕರುಣಿಸಲಿ.

ಅಭಿಪ್ರಾಯ