ಹಿರಿಯನಾಗರಿಕರು ಜೀವನದುದ್ದಕ್ಕೂ ತಮ್ಮ ಕುಟುಂಬದ ಹಾಗೂ ಮತ್ತಿತರ ಏಳಿಗೆಗಾಗಿ ಅಹೋರಾತ್ರಿ ದುಡಿದು, ಬಳಲಿ, ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಇಚ್ಚಿಸುತ್ತಿರುವ ಜೀವಗಳು. ತಮ್ಮ ಮಕ್ಕಳು ತಮ್ಮನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಿ ಎಂಬ ಆಸೆ ಇದ್ದರೂ ಮಕ್ಕಳ ಪ್ರಗತಿಗೆ , ಜೀವನ ಶೈಲಿಗೆ ತಮ್ಮಿಂದ ಅಡಚಣೆಯಾಗಬಾರದೆಂಬ ಮನೋಭಾವ ಉಳ್ಳವರು ಬೆಳೆದ ಮಕ್ಕಳು ಸಂಕಷ್ಟದಲ್ಲಿದ್ದಾಗ ತಮ್ಮ ಕೈಯಲ್ಲಿದ್ದುದನ್ನುಅವರಿಗೆ ನೀಡಿ ತಮ್ಮ ಸ್ವಂತ ಭವಿಷ್ಯದ ಯೋಚನೆ ಮಾಡದಿರುವಷ್ಟು ಮುಗ್ಧರು. ಜೀವನ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾಗಿ ಬದುಕುತ್ತಿರುವ ವಯೋವೃದ್ದರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ದಿನ ಬೆಳಗಾದರೆ ದಿನಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿರುವ ಹಿರಿಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯ,ಕೊಲೆ,ಬೆದರಿಕೆ,ಸುಲಿಗೆ,ಹಲ್ಲೆಗಳಿಂದ ಹೆದರಿದರೂ ಅದಕ್ಕಾಗಿ ಏನು ಮಾಡಬೇಕೆಂದು ಸರಿಯಾದ ಮಾಹಿತಿ ಇಲ್ಲದೆ ಮನೆಯೊಳಗೆ ಕುಳಿತಿರಬೇಕಾದ ಪರಿಸ್ಥಿತಿ ಹಿರಿಯ ನಾಗರಿಕರದ್ದಾಗಿದೆ. ಅನಾರೋಗ್ಯ, ಮರೆವು, ಅಜಾಗರೂಕತೆ ಇವುಗಳಿಂದಾಗಿ ಮನೆಯಲ್ಲೂ ನೆಡೆಯುವ ಮನಸ್ತಾಪಗಳಿಗೆ ಸಿಲುಕುತ್ತಾ ಸದಾಕಾಲ ಆತಂಕದ ಜೀವನ ನೆಡೆಸುವಂತಾಗಿದೆ. ಈ ಪರಿಸ್ಥಿತಿಯನ್ನು ಹೋಗಲಾಡಿಸಿ ವೃದ್ದರು ನೆಮ್ಮದಿಯ ಜೀವನ ನೆಡೆಸಲು ಅನುವು ಮಾಡಿಕೊಡಬೇಕಾಗಿರುವುದು ಸಮಾಜದ ಕರ್ತವ್ಯ. ಇದಕ್ಕೆ ವೃದ್ದರ, ಅವರ ಸಂಬಂಧಿಕರ, ಸರ್ಕಾರದ ವಿವಿಧ ಅಂಗಗಳ, ಸರ್ಕಾರೇತರ ಸಮಾಜ ಸೇವಾ ಸಂಸ್ಥೆಗಳ,ನಮ್ಮ ನಿಮ್ಮೆಲ್ಲರ ಅವಶ್ಯಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ 1991ರಲ್ಲಿ ಪಂಚ ತತ್ವಗಳನ್ನು ಅನುಮೋದಿಸಿದೆ. ಈ ತತ್ವಗಳ ಆಧಾರದ ಮೇಲೆ ಭಾರತ ಸರ್ಕಾರವು ಸಹ ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಮ್ಮ ದೇಶದ ಸಂವಿಧಾನದ ಕಲಂ 41 ಮತ್ತು 46 ರಲ್ಲಿ ಹಿರಿಯನಾಗರಿಕರ ಹಿತ ರಕ್ಷಣೆ ಸಹ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ.
ಇಂತಹ ಸಂದರ್ಭದಲ್ಲಿ “ಸುರಭಿ ವೃದ್ದಾಶ್ರಮವನ್ನು” 2018ರಲ್ಲಿ ಸುರಭಿ ಮಹಿಳಾ ಮಂಡಳಿ ಸಂಸ್ಥೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅನುದಾನದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಲವಾದ ಜಾಗದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡ ಕಟ್ಟಡದಲ್ಲಿ ವೃದ್ದಾಶ್ರಮವನ್ನು ಸ್ಥಾಪಿಸಿ ಈ 3 ವರ್ಷಗಳಲ್ಲಿ ಸುಮಾರು 187 ಜನ ವೃದ್ದರಿಗೆ ಆಶ್ರಯ ನೀಡಿ ಒಂದು ನೆಲೆಯನ್ನು ಕಟ್ಟಿಕೊಟ್ಟಿರುವ ಹೆಮ್ಮೆಯ ಕೇಂದ್ರವಾಗಿರುತ್ತದೆ.
ನಮ್ಮ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಮುಖ್ಯಕಾರಣ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಮೀನಾಕ್ಷಮ್ಮ ಪಾಟೀಲ,ಕಾರ್ಯದರ್ಶಿಗಳಾದ ಶೀಲಾ ಪಾಟೀಲ ಹಾಗೂ ನಿರ್ವಾಹಕ ನಿರ್ದೇಶಕರಾದ ಡಾ. ಶಂಕರ್ ಪಾಟೀಲ ಬಿ ಜಿ ಅವರ ಪ್ರೊತ್ಸಾಹವಾಗಿದೆ. ನಮ್ಮ ಆಶ್ರಮದಲ್ಲಿ ಏನೇ ಚಿಕ್ಕ ಸಮಸ್ಯಯಾದರು ಸಂಸ್ಥೆಯ ಯೋಜನಾ ಅಧಿಕಾರಿಗಳಾದ ಶ್ರೀ ಬಸವರಾಜ ಬೇವಿನಮರದ ಅವರು ತಕ್ಷಣವೇ ಸ್ಪಂದಿಸುತ್ತಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಾಮಾಜಿಕ ಮನೋಭಾವನೆಯುಳ್ಳ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತೆ ದೇವರು ಶಕ್ತಿ ತುಂಬಲೆಂದು ಶುಭ ಹಾರೈಸುವೆವು.
ಭಾರತೀಯ ಮೂಲದ ಯಾವುದೇ ಹಿರಿಯ ನಾಗರಿಕರಿಗೆ ಪ್ರವೇಶವು ಮುಕ್ತವಾಗಿದೆ ಅವರು ಒಂಟಿತನದಿಂದಾಗಿ ಅಥವಾ ಅವರ/ಅವಳನ್ನು ನೋಡಿಕೊಳ್ಳುವ ಯಾವುದೆ ಕುಟುಂಬ/ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಅಥವಾ ಅವರ ಜೀವಂತ ಹಕ್ಕನ್ನು ಸಮರ್ಪಕವಾಗಿ ಚಲಾಯಿಸಲು ಸಾಧ್ಯವಾಗದ ವ್ಯಕ್ತಿಗಳು ತಮ್ಮ ಸ್ವಂತ ಮಕ್ಕಳ ರೀತಿಯಿಂದ ನಿರ್ಲಕ್ಷಿಸಲ್ಪಟ್ಟವರು ಅಥವಾ ಕುಟುಂಬ ಹೊಣೆಗಾರಿಕೆಗಳಿಂದ ಮುಕ್ತರಾಗಿರುವರು ಮತ್ತು ತಮ್ಮ ಉಳಿದ ಜೀವನಕ್ಕಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವವರು.
ಸಾಂಕ್ರಾಮಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ, ಕ್ರಿಮಿನಲ್ ಪ್ರಕರಣಗಳು ಅಥವಾ ಅಪರಾಧಗಳಲ್ಲಿ ಭಾಗಿಯಾಗಿರುವ ಅಥವಾ ಮಧ್ಯಪಾನ /ಡ್ರಗ್ಸ್ ಔಷಧಗಳು ಇತ್ಯಾದಿಗಳಿಗೆ ವ್ಯಸನಿಯಾಗಿರುವ ಹಿರಿಯ ನಾಗರಿಕರು ಪ್ರವೇಶ ಪಡೆಯಲು ಅನರ್ಹರಾಗಿರುತ್ತಾರೆ.
ಸುರಭಿ ವೃದ್ಧಾಶ್ರಮ ಸ್ವಯಂ ಸಂಸ್ಥೆಗೆ ಅರ್ಹ ಫಲಾನುಭವಿಗಳು:
ವೃದ್ರಾಶ್ರಮದ ಪರಿಕಲ್ಪನೆಯು ಇಂದು ಸಾಕಷ್ಟು ಪರಿಚಿತವಾಗಿದೆ . ವಯಸ್ಸಾದ ಪೋ಼ಷಕರು ಅನುಭವ ಮತ್ತು ಜ್ಞಾನದ ನಿಧಿ ಮಕ್ಕಳು ಅವರನ್ನು ರಕ್ಷಿಸಬೇಕು ಅವರು ಜೀವನದ ಆಧಾರಸ್ತಂಭ ಹಿರಿಯ ಹಂತ ಹಿರಿಯ ನಾಗರಿಕರಿಗೆ ವೃದ್ರಾಶ್ರಮದಲ್ಲಿ ಪ್ರವೇಶಿಸುವುದು ಮೊದಲ ಆಯ್ಕೆಯಾಗಿರದೆ ಕೊನೆಯ ಆಯ್ಕೆಯಾಗಿರಬೇಕು. ನಮ್ಮ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರನ್ನು ವಯಸ್ಸಾದ ತಂದೆ ತಾಯಿಯವರನ್ನು ಸಾಕಷ್ಟು ಗೌರವಿಸಲಾಗುತ್ತಿತ್ತು ಮತ್ತು ಅವರು ಸಹ ಗೌರವದಿಂದ ಬದುಕುತ್ತಿದ್ದರು ಅವರ ಕೊನೆಯ ಉಸಿರಾಟದ ತನಕ ಕುಟುಂಬ ಮಕ್ಕಳು ಸಂಬಂಧಿಕರು ಮನೆತನ ಘನತೆ ಇವುಗಳನ್ನು ಸಾಂಪ್ರದಾಯಿಕ ಆದರ್ಶ ಪೂರಕವಾಗಿ ಜೀವನ ಸಾಗಿಸುತಿದ್ದರು. ಆದರೆ ಇಂದು ಪರಿಸ್ಥಿತಿಗಳು ಬಹಳಷ್ಟು ಬದಲಾಗಿವೆ ಇಂದಿನ ಯುವ ಪೀಳಿಗೆ ವಯೋವೃದ್ಧರನ್ನು ಕಡೆಗಣಿಸಿ ಕುಟುಂಬದಿಂದ ಹಿಂದಕ್ಕೆ ಸರಿಸುತ್ತಿದ್ದಾರೆ ವಯಸ್ಸಾದವರನ್ನು ಕುಟುಂಬದ ಹೊರೆ ಎಂದು ಭಾವಿಸುತ್ತಿದ್ದಾರೆ.
ಜಾಗತೀಕರಣದ ಯುಗದಲ್ಲಿ ವಿಶ್ವವು ಜಾಗತಿಕ ಗುಣಮಟ್ಟದಲ್ಲಿ ಯುವ ಪೀಳಿಗೆಯು ಮುಂದುವರಿದ ಆರ್ಥಿಕತೆ, ಉನ್ನತ ಶಿಕ್ಷಣ, ಉನ್ನತ ವೃತ್ತಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದ ಹಿರಿಯರನ್ನು ಪೋಷಣೆ ಮಾಡಲಾಗದೆ ಭೌತಿಕ ಜೀವನದ ಕಡೆಗೆ ಹೆಚ್ಚು ಒಲವು ಮೂಡುತ್ತಿದೆ. ಇಂತಹ ಸಂದರ್ಭಗಳಲ್ಲಿ ವೃದ್ಧರು ಮಕ್ಕಳ ಪ್ರೀತಿ ಬಾಂಧವ್ಯ ಪಡೆದುಕೊಳ್ಳಲಾಗದೆ ಅವರು ಏಕಾಂಗಿತನ ನಿರಾಸೆ ಅಸಂತೋಷದಿಂದ ಭಾವನೆಗಳನ್ನು ಅನಭವಿಸುತ್ತಾರೆ. ವೃದ್ಧಾಪ್ಯದ ಮನೆಗಳು ಹಿರಿಯ ನಾಗರಿಕರಿಗೆ ಅಗತ್ಯ ಮತ್ತು ವಯಸ್ಸಾದವರನ್ನು ಉತ್ತಮ ಸೌಲಭ್ಯಗಳೊಂದಿಗೆ ಪೋಷಣೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ವೃದ್ದಾಶ್ರಮಗಳು ಸಾಮಾಜಿಕ ಸಮೀಕ್ಷೆಗಳಿಂದ ಹಿರಿಯರನ್ನು ನೋಡಿಕೊಳ್ಳುವಲ್ಲಿ ಕರುಣೆ, ಹೊಂದಾಣಿಕೆ, ಪಿತೃವಾತ್ಸಲ್ಯ, ಮಾತೃವಾತ್ಸಲ್ಯ, ಅಂಶಗಳನ್ನು ಮನದಲ್ಲಿಟ್ಟುಕೊಂಡು ಜನಮಾನಸದಲ್ಲಿ ಉಳಿದಿವೆ. ಅವರಿಗೆ ಆಶ್ರಯ ಕಲ್ಪಿಸುವುದರ ಮೂಲಕ ಏಕಾಂಗಿಯಾಗಿ ಅಥವಾ ಕಾಳಜಿ ವಹಿಸಲು ಯಾರೊಬ್ಬರೂ ಇಲ್ಲದಿರುವಾಗ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಮಾನವೀಯತೆಯ ಅಂತಃಕರಣದಿಂದ ಪುನರ್ ವಸತಿ ಕಲ್ಪಿಸಲಾಗುವುದು.
ವಿಭಕ್ತ ಕುಟುಂಬಗಳ ಹೆಚ್ಚಳದಿಂದಾಗಿ ವೃದ್ಧಾಪ್ಯದ ಮನೆಗಳು ಪ್ರಸ್ತುತ ಸಮಾಜಕ್ಕೆ ಬಹಳ ಮುಖ್ಯ. ವೃದ್ದಾಶ್ರಮಗಳು ಹಿರಿಯ ವಯೋವೃದ್ದರ ಆರೈಕೆ ಕೇಂದ್ರಗಳಾಗಿ, ನಿವೃತ್ತಿ ನಂತರದ ವಾಸಸ್ಥಾನಗಳಾಗಿ ಬದಲಾಗಿವೆ. ವಯಸ್ಸಾದ ಜನರು ತುಂಬು ಕುಟುಂಬದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಯಸ್ಸಾದವರ ಕೈಯಲ್ಲಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ವಿಭಕ್ತ ಕುಟುಂಬಗಳ ಪ್ರಭಾವದಿಂದ ವಯಸ್ಸಾದ ಹೆತ್ತವರನ್ನು ಹೊರೆಯಾಗಿ ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಅಮಾನವೀಯ ವರ್ತನೆಗಳಿಂದ ನಿಂದನೆಗಳ ಮೂಲಕ ತಮ್ಮ ಹೆತ್ತವರನ್ನು ದೂರಮಾಡುವ ಮೂಲಕ ಅವರಿಗೆ ಕುಟುಂಬದಿಂದ ಕಡೆಗಣಿಸುವ ಮನೋಭಾವನೆ ಬೆಳೆದು ಬಂದಿದೆ ಇದು ಒಂದು ವೃದ್ಧಾಶ್ರಮಗಳ ಹೆಚ್ಚಳಕ್ಕೆ ಕಾರಣವಾಗಿದೆ.ಬದಿನದಿಂದ ದಿನಕ್ಕೆ ವಯಸ್ಸಾದವರು ಹೆಚ್ಚು ಪ್ರತ್ಯೇಕವಾಗುತ್ತಿದ್ದಾರೆ ಯುವ ಪೀಳಿಗೆ ತಂದೆ ತಾಯಿಯವರನ್ನ ಕಾಳಜಿ ಹೊಂದಾಣಿಕೆ ಮಾಡದೆ ಕಡಿಮೆ ತಾಳ್ಮೆ ಮತ್ತು ಸಮಯದಿಂದ ಮಕ್ಕಳು ಸ್ವತಃ ವೃದ್ಧಾಶ್ರಮಕ್ಕೆ ಸೇರಲು ಒತ್ತಾಯಿಸುತ್ತಿದ್ದಾರೆ ಇದು ಒಂದು ಆಯ್ಕೆಯಾಗಿರುತ್ತದೆ.
ವೃದ್ದರನ್ನು ಹಿರಿಯ ನಾಗರಿಕರನ್ನು ಗೌರವದಿಂದ ಪ್ರೀತಿಯಿಂದ ಕಂಡು ಆರೈಕೆ ಮಾಡುವ ಅವಶ್ಯಕತೆ ಇರುತ್ತದೆ ಆ ನಿಟ್ಟಿನಲ್ಲಿ ಸುರಭಿ ವೃದ್ದಾಶ್ರಮವು ಕಾಯ,ವಾಚ,ಮನಸಾ,ಉದ್ದೇಶಗಳಿಂದ ಮುನ್ನೆಡೆಯುತ್ತಾ ಸಾಗುತ್ತಿದೆ.ವಯಸ್ಸಾದ ವೃದ್ದರು ಒಟ್ಟಿಗೆ ವಾಸಿಸಲು ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುರಭಿ ವೃದ್ದಾಶ್ರಮದಲ್ಲಿ ಆರೈಕೆ ಮತ್ತು ಸೇವೆಗಳನ್ನು ಈ ಕೆಳಗಿನಂತೆ ಕಲ್ಪಿಸಲಾಗುವುದು.